ಸೋಮವಾರ, ಜುಲೈ 21, 2014

ಬಾನ್ದನಿ

ನಾನಿಲ್ಲದಿದ್ದರೂ ಬಾನಿಹುದು ನೋಡ
ತಾನನದ ದನಿಯಿಹುದು ಎಲ್ಲೆಲ್ಲೂ ಕೇಳ

ನಾಳೆಗಳ ಎಣಿಕೆಯಲಿ ಈ ಕ್ಷಣವ ಮರೆತರೂ
ಕಾಲತಾಳಕೆ ಮಳೆಯು ಸುರಿಯುವಂತೆ
ಜಲಮೂಲಗಳಿಗೆಲ್ಲ ವಿಷವುಣಿಸುತಿದ್ದರೂ
ಇಳೆಯೆಡೆಗೆ ನೀರದನು ಜಾರುವಂತೆ

ತಾರೆಗಳ ತೋಟಕ್ಕೆ ಮೇರೆಯಿಲ್ಲವಾದರೂ
ಯಾರೋ ಎಲ್ಲವನೂ ಕಾಯುವಂತೆ
ಆ ರವಿಯ ಕಿರಣಗಳು ಸರಿಗಮದ ನಡೆಯಲ್ಲಿ
ಸ್ವರದ ಭಾವಕೆ ಬಳುಕಿ ಬಾಗುವಂತೆ

ಇದೆ ನೋಡು ಈ ಜಗವು ಲಯಬದ್ಧ ಹಾಡಂತೆ
ಪದವೊಂದು ಅಂಕುರಿಸಿ ಬೆಳೆದು ಬೆಳೆದು  
ಎದೆಯುಸಿರ ತಾ ತುಳಿದು ಬಾನಗಲ ಸಂಚರಿಸಿ
ನಾದದಲೆಯಲಿ ತೇಲಿ ನಲಿಯುತಿಹುದು

ಡಿ.ನಂಜುಂಡ
21/07/2014



2 ಕಾಮೆಂಟ್‌ಗಳು:

  1. ’ ಜಲಮೂಲಗಳಿಗೆಲ್ಲ ವಿಷವುಣಿಸುತಿದ್ದರೂ
    ಇಳೆಯೆಡೆಗೆ ನೀರದನು ಜಾರುವಂತೆ’
    ಮತ್ತು
    ಶೀರ್ಷಿಕೆಗೆ ನಮ್ಮ ಶರಣು.

    ಪ್ರತ್ಯುತ್ತರಅಳಿಸಿ
  2. ಮೆಚ್ಚುಗೆಯೊಂದಿಗೆ ನಿಮ್ಮ ಅಭಿಪ್ರಾಯ ದಾಖಲಿಸಿದ್ದಕ್ಕೆ ಕೃತಜ್ಞತೆಗಳು

    ಪ್ರತ್ಯುತ್ತರಅಳಿಸಿ