ಸ್ವಾವಲೋಕಿತ ಸ್ವಸ್ಥಚಿಂತಿತ
ಭಾವಸಂಸ್ಕøತ ಶೋಭಿತ
ಸ್ವಾವಲಂಬಿತ ಶಕ್ತಿsಸಂಚಿತ
ಸ್ವಾಭಿಮಾನವು ಸಂತತ
ಧಾರೆಯಾಗಿಸಿ ಹೇಳಲೆಲ್ಲರು
‘ನಮ್ಮ ದೇಶವು ಭಾರತ’
ಪಾಂಚಭೌತಿಕ ದೃಷ್ಟ್ಯಗೋಚರ
ಪರಮಕೌತುಕ ಶಕ್ತಿಯ
ಮನನಮಾತ್ರದಿ ಮಂತ್ರವಾಗಿಸಿ
ಸ್ತುತಿಸಿ ಸೃಷ್ಟಿಸಮಷ್ಟಿಯ
ನಿತ್ಯವರ್ಚನೆಗೈಯುತಿರಲಿ
ಪುಣ್ಯಭಾರತಭೂಮಿಯ
ವಿಶ್ವಮಾನವ ದೃಷ್ಟಿಕೋಣವ
ನಾಂತು ಶಾಂತಸುಭಾವದಿ
ಸ್ವಾರ್ಥದಾನವ ಕ್ರೌರ್ಯಕೋಟಿಯ
ನಿಸ್ಸ್ವಾರ್ಥತೆಯ ಶೂಲದಿ
ದಮನಗೊಳಿಸುವ ಪುಣ್ಯಭೂಮಿಯ
ಗಂಧವಿರಿಸುತ ನೊಸಲಲಿ
ಏಕಕಂಠದಿ ಹಾಡಲೆಲ್ಲರು
“ಸುದೃಢದೇಶವು ಭಾರತ”
ಡಿ.ನಂಜುಂಡ
29/08/2017
12/09/2017