ಸೋಲೇ ಗೆಲುವಿನ ಸೋಪಾನ
ಬಾಳೊಳು ಅದುವೇ ಸಂಮಾನ
ಅಡಿಗಡಿಗೆಡುವುತ ಮುನ್ನಡಿಯಿಟ್ಟರೂ
ನಡತೆಯು ಒಳಿತಿರಲವ ಜಾಣ
ಗಡಿಬಿಡಿಯಿಂದಲಿ ತಡವರಿಸಿದರೂ
ನುಡಿಗಳು ಶುಚಿಯಿರಲದೆ ಮಾನ
ಮದ್ಯದ ಅಮಲಲಿ ಪದಗಳನಾಡುತ
ವಿದ್ಯೆಯ ಬೋಧಿಸೆ ಅವಮಾನ
ಗದ್ದಲ ತುಂಬಿರೆ ಮನದಾಳದೊಳಗೆ
ಬುದ್ಧಿಯಿರುವುದೇ ಅನುಮಾನ
ಬಿದ್ದವನೇಳದೆ ಮಲಗಿಯೆ ಇದ್ದರೆ
ಸದ್ಯವೆ ಸೋಲಿದೆ ತಿಳಿ ಜಾಣ
ಬಿದ್ದವನೇಳುತ ಗೆಲುವೆಡೆಗಡಿಯಿಡೆ
ಬುದ್ಧನ ಪದವಿಗೆ ಸೋಪಾನ
ಡಿ.ನಂಜುಂಡ
05/08/2017
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ