ದುರ್ಗಮ ಮನವನದಂತರತಮಶಿವ-
ಪದಸಂಚಲನದ ದನಿ ಕೇಳಿ
ಭಾವೋತ್ಪಲಗಳ ಕಾವ್ಯೋದ್ಯಾನದಿ
ವಾಗರ್ಥಗಳಾ ರತಿಕೇಲಿ
ಮತಿಗಿರಿಜಾಸಹನಾಟ್ಯದ ವೇಳೆ
ಚಿತ್ತಾಂತರ್ಯದ ಶಿಲೆಗಳ ಮೇಲೆ
ಸತ್ಯಾತ್ಮನ ಸುಖಶಾಂತಿಯ ಮೌನಕೆ
ಓಂತರುಪಲ್ಲವ ಶರ ಸೋಕೆ
ಜಿಹ್ವಾಮೂಲದಿ ಘಂಟಾಧ್ವಾನ
ಅಕ್ಷರಬಂಧಕದಾಹ್ವಾನ
ಸ್ವರವ್ಯಂಜನದಾಲಿಂಗನದಲಿ
ಕವಿತಾ ಮೃದುಪದಸಂಚಲನ
ಡಿ.ನಂಜುಂಡ
17/01/2015
ವಾವ್... ಮೃದು ಪದಸಂಚಲನ!
ಪ್ರತ್ಯುತ್ತರಅಳಿಸಿಧನ್ಯವಾದಗಳು ಬದರಿಯವರೇ..
ಪ್ರತ್ಯುತ್ತರಅಳಿಸಿ