ಶುಕ್ರವಾರ, ಏಪ್ರಿಲ್ 24, 2015

ಹೃದಯದೊಳಡಿಯಿಡು ಗೋಪಾಲ

ಹೃದಯದೊಳಡಿಯಿಡು ಗೋಪಾಲ ನೀ
ಪದುಮದಿ ಮಧುವಿಡು ಬಾ ಬಾಲ
ಪದಪದದುಸಿರನು ಬಿದಿರೊಳು ತೇಲಿಸಿ
ನಾದವ ತುಂಬಿಸು ವನಮಾಲ

ವನಖಗಜಲಭೂಚರಗಳ ಇಂಚರ-
ದನುರಣವೆನ್ನೆದೆಯೊಳಗಿರಿಸು
ಚಣಚಣವೂ ಮರದೆಲೆಗಳ ಹಸಿರನು
ಕಣಕಣದೊಳು ನೀ ತಂದಿರಿಸು

ಭೂಜಲವಾಯ್ವಾಕಾಶಾನಲಗಳ
ಭಜಿಸುವ ಭಾವವ ಒಳಗಿರಿಸು
ಕುಜಗುರುಬುಧಶನಿರವಿಶಶಿಶುಕ್ರರ
ಪೂಜಿಪ ಮತಿಯನು ಪತಿಕರಿಸು

ಡಿ.ನಂಜುಂಡ

24/04/2015

1 ಕಾಮೆಂಟ್‌:

  1. ಕುಜಗುರುಬುಧಶನಿರವಿಶಶಿಶುಕ್ರ ಏಕೀಭವಿಸಿದ ಕವಿ ಪ್ರತಿಭೆಗೆ ನಮನ.

    ಅಪರೂಪಕ್ಕೆ ಇತರರ ಬ್ಲಾಗಿಗೂ ಆಗಮಿಸಿ ಹರಿಸಿರಿ.

    ಪ್ರತ್ಯುತ್ತರಅಳಿಸಿ