ಶನಿವಾರ, ಜೂನ್ 4, 2016

ಬೆಳಗು

ಉದಯರವಿಯ ಮೊದಲ ಕಿರಣ
ದೇವಗಿರಿಯ ಸ್ಪರ್ಶಿಸಿ
ಹೊಂಬೆಳಕಿನ ಮಳೆಗರೆದಿರೆ
ಕಂಗಳ ಗರಿಗೆದರಿಸಿ

ಮರಗಳ ಹರೆಹರೆಗಳಲ್ಲಿ
ಹಕ್ಕಿಗಳೆದೆಗಳನೊಕ್ಕಿ
ಓಂಕಾರವದಂಕುರಿಸಿದೆ
ಕಲರವಗಳಲುಕ್ಕುಕ್ಕಿ

ಹಸಿರ ಹುಲ್ಲ ಗಲ್ಲಕಿಳಿದ
ಇಬ್ಬನಿಯೊಡೆದೊಡೆಯುತಲಿ
ತಬ್ಬಿದರೂ ತಾಕದಂತೆ
ಕುಕ್ಕರಿಸಿವೆ ಕುಳಿಗಳಲಿ

ಹರಿವ ಹೊಳೆಯ ಮೇಲ್ ಮೈಯನು
ಸೋಕಿ ಬಂದ ತಂಬೆಲರು
ಎದೆಮಣ್ಣನು ಪಸೆಯೊಡೆಸಿರೆ
ಕಣಕಣವೂ ಘಮದಲರು

ಹೂವೆಲ್ಲವನರ್ಪಿಸಲಿಕೆ
ಹುಡುಕಿದೆ ರವಿಚರಣವ
ಕಾಣದೆ ಕಂಗಾಲಾಗಿರೆ
ಕಂಡೆನು ರವಿಯುದಯವ

ಡಿ. ನಂಜುಂಡ

04/06/2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ