ಬಾಲ್ಯವಳಿದು ಹರೆಯ ಕಳೆದು
ಬಾಳ ಬೈಗುಗೆಂಪು ತಳೆದು
ಕಾಲ ಬಲವು ಕೆಳಕೆ ಕುಸಿಯೆ
ನೆಲದಾಳದಿ ಹೂತು
ಮಣ್ಣಾಗುವ ಕಾಮನೆಗಳೆ!
ಬಣ್ಣ ತಾಳುವಿರೇಕೆ?
ಕಾಡು ಸನಿಹವಾದರೂ
ಕಾಡಿ ಕೆಣಕುವಿರೇಕೆ?
ಕಾಲದ ಮೊರದಲ್ಲಿ ತೂರಿ
ಜೊಳ್ಳೆಲ್ಲವು ಹಾರಿ
ಅಳಿದುಳಿದವುಗಳುದುರುದುರಿ
ಇಳೆಗೆ ಬೀಳೆ ಜಾರಿ
ಎಲೆಗೊಳಕಿನ ಗೊಬ್ಬರದೊಲು
ಬೆಳೆಯ ಬೇರಿಗೇರಿ
ನಳನಳಿಸುವಿರೇನು ಬಳ್ಳಿ
ಬಳುಕಿನೆಲ್ಲೆ ಮೀರಿ
ಡಿ.ನಂಜುಂಡ
03/07/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ