ಮಂಗಳವಾರ, ಆಗಸ್ಟ್ 9, 2016

ಶಕ್ತಿ

ಪಂಚಕರಣವಿಷಯವೆಂಬ
ರಾಮರಸವ ಕುಡಿದ
ಶಕುತಿ ನೀನು ಸುರುಳಿ ಸುತ್ತಿ
ಮಲಗಿ ನಿದ್ದೆಗೈದ

ವಿಶ್ವಪುರುಷವಿರಹಿ ಪ್ರಕೃತಿ!
ಏಳು ಮೇಲಕೇರು
ಆರು ಗಂಟುಗಳನು ಬಿಡಿಸಿ
ನಿನ್ನಿನಿಯನ ಸೇರು

ಇಂದ್ರಿಯಗಳ ಉಪವಾಸಕೆ
ನೀನೆಚ್ಚರವಾಗೆ
ಸಾವ ಕಳೆವ ಸುಧೆಯನುಣಲು
ಮೇಲೆ ಮೇಲೆ ಸಾಗೆ

ಆರರಿಗಳ ಕಚ್ಚಿ ಕೊಲುವೆ
ಮುಕ್ತಿಪಥವ ತೆರೆವೆ
ಭಾವದಗಲ ಬೆಳಕನೆರೆದು
ಹಾವ ಗತಿಯ ತೊರೆವೆ

ಡಿ.ನಂಜುಂಡ
09/08/2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ