ಶುಕ್ರವಾರ, ಆಗಸ್ಟ್ 2, 2013

ಹಾರಲಾರೆ ಏತಕೆ?ಗುಬ್ಬಿಯೊಂದು ಮನೆಗೆ ಬಂದು
ಕಿಟಕಿ ಮೇಲೆ ಕುಳಿತಿದೆ.
ಅತ್ತ ಒಮ್ಮೆ ಇತ್ತ ಒಮ್ಮೆ
ದಿಟ್ಟ ನೋಟ ಬೀರಿದೆ.

ಒಣಗಲಿಟ್ಟ ಹೆಸರು ಕಾಳ
ಕೊಕ್ಕಿನಲ್ಲಿ ಹಿಡಿದಿದೆ.
ಮಹಡಿ ಮೇಲೆ ಹಾರಿ ಹೋಗಿ
ತನ್ನ ಮರಿಯ ಕರೆದಿದೆ.

ತಾಯ ಬಳಿಗೆ ಬಂದ ಮರಿಯು
ಚಿಂವು ಚಿಂವುಗುಟ್ಟಿದೆ.
ತನ್ನ ಮರಿಯ ಬಾಯಿಯೊಳಗೆ
ಗುಟುಕನೊಂದನಿಟ್ಟಿದೆ.

ಕಾಳು ತಿಂದ ಗುಬ್ಬಿಮರಿಯು
ರೆಕ್ಕೆಯನ್ನು ಬಿಚ್ಚಿದೆ.
ತಾಯಿಯೊಂದಿಗದೂ ಹಾರಿ
ಮರದ ಮೇಲೆ ಕುಳಿತಿದೆ.

ಗುಬ್ಬಿಯಂತೆ ಹಾರುವಾಸೆ
ಹಾರಲಾರೆ ಮೇಲಕೆ?
ಅದರ ಹಾಗೆ ರೆಕ್ಕೆ-ಪುಕ್ಕ
ನನಗೆ ಇಲ್ಲ ಏತಕೆ?

ಡಿ.ನಂಜುಂಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ