ಬಾ ಮಳೆಯೆ ಬಾರೆ ಇಳೆಗಿಳಿಯೆ ನೀರೆ
ಉಡು ಬೇಗ ಕರಿಯ ಸೀರೆ
ನಿನ ಸೆರಗ ತುದಿಯು ಅತ್ತಿತ್ತ ಹಾರಿ
ಗಿರಿಯ ತಲೆಸವರಿ ಜಾರೆ
ಜರಿತಾರಿಯಂಚ ಮಿಂಚಿನಲಿ ನಿನ್ನ
ಯೌವನವ ಕಂಡ ಗಿರಿಯ
ಮೈಬಿಸಿಯ ಸೋಕಿ ನೀನವಗೆ ತಾಕೆ
ಪುಳಕಗೊಂಡೀತೆ ಹರಯ?
ನೀ ಗಂಗೆಯಾಗಿ ಗಿರಿಶಿವನ ತಬ್ಬಿ
ಅವನೊಡನೆ ಕ್ಷಣವ ಕಳೆದು
ತರುರೋಮದಂಚುಗಳು ನೇರಗೊಳಲು
ಸುರಿ ನಿನ್ನ ಬೆಡಗ ಬಸಿದು
ನಿನ ಚೆಲುವು ಚೆಲ್ಲಿದಲ್ಲೆಲ್ಲ ಜಲವು
ಬನಬನದಿ ಹೊನಲ ನಗುವು
ಕೆರೆಬಾವಿಮೈಗಳುಬ್ಬುಬ್ಬಿ ನಿಲಲು
ಅದುವೆ ನಿನ್ನೊಲವ ಬಲವು
ಡಿ.ನಂಜುಂಡ
09/04/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ