ಶನಿವಾರ, ಡಿಸೆಂಬರ್ 21, 2013

ಬಿಲ್ಲಾಗಿದೆ ತನುವು



ಚಳಿಯ ಗಾಳಿಗೆ ತನುವು ಬಾಗಿರೆ
ಹರನ ಬಿಲ್ಲಿನ ತೆರದಲಿ
ಹೊದ್ದು ಮಲಗುತ ನಿದ್ದೆ ಹೋದರು
ಮಂದಿಯೆಲ್ಲರು ಮನೆಯಲಿ

ಮೇಲಕೇಳುವ ಯತ್ನವೆಲ್ಲವು
ವಿಫಲವಾಗಲು ಮನದಲಿ
ಕಾಲ ಗಂಟನು ಎದೆಗೆ ಮುಟ್ಟಿಸಿ
ಯೋಗಿಯಾದರು ಕ್ಷಣದಲಿ

ಬಿಲ್ಲ ಹಗ್ಗವ ಪಿಡಿದು ಜಗ್ಗಲು
ಬಿಸಿಲಿನರಸನು ಬಾನಲಿ
ಹಲ್ಲ ಕಡಿಯುತ ಮೆಲ್ಲನೆದ್ದರು
ನಿಂತರೊಲೆಗಳ ಬದಿಯಲಿ

ಹರಿದು ಹಗ್ಗವು ಕೆಳಗೆ ಬೀಳಲು
ಸಂಜೆಗೆಂಪಿನ ಕಡಲಲಿ
ಹರಿಯ ಛಾಪಕೆ ಸಾಟಿಯಾಯಿತು
ಮತ್ತೆ ತನುವದು ಚಳಿಯಲಿ

ಡಿ.ನಂಜುಂಡ
22/12/2013

2 ಕಾಮೆಂಟ್‌ಗಳು:

  1. ನೀರಾ ಒಲೆಯ ಕೆಂಡ ದಲ್ಲಿಯ ಗೇರು ಬೀಜದ ಕಂಪಲ್ಲಿ
    ಸಂಜೆಗತ್ತಲು ಮೂಡುತಿರಲು ಹಲಸಿನಪ್ಪಳ ಜೊತೆಯಲಿ
    ಅಜ್ಜಿ ಸೀರೆಯಾ ದಟ್ಟ ಹೊದ್ದು ಛಳಿಯ ತಾಳುತ ಮಲಗಲು.
    ಮಂಜು ಕವಿದ ಮುಂಜಾವದಲ್ಲಿ ಕೈಯನ್ನುಜ್ಜುತ ನಿಲ್ಲಲು.
    ಅಜ್ಜಿ ತಂದರು ಜಗಲಿಗೆ ಬಿಸಿ ಕಾಫಿ ಲೋಟವ ಕೈಯಲ್ಲಿ...
    ===============================

    ನಾರ್ವೆ ಅಜ್ಜಿ ಮನೆಯ ಸವಿ ಸವಿ ನೆನಪು.....

    ================================

    ಪ್ರತ್ಯುತ್ತರಅಳಿಸಿ