ಬಾನಿನೊಳಗೆ ತೂರುತಿರಲು ಮನೋವಿಮಾನಯಾನ
ಹೊನಲಿನಂತೆ ಹರಿಯುತಿಹುದು ಎನ್ನ ಎದೆಯ ಗಾನ
ಜೀವಭಾವಪಾತ್ರೆಯೊಳಗೆ ಯಾವುದದರ ಇಂಧನ?
ದೇವನಿಯತಸೃಷ್ಟಿಯೊಳಗೆ ಎಲ್ಲಿಹುದದರ ತಾಣ?
ಚಲನಮೂಲದಲ್ಲಿ ಇರಲು ಅನಂತಕಾಲಧ್ಯಾನ
ಚಲಿತನಾಟ್ಯರಂಗದಲ್ಲಿ ಎಲ್ಲಿದೆ ವರ್ತಮಾನ?
ಸಾವ ನೋವ ಚಿಂತೆಯೆಲ್ಲ ಭೂತಭವ್ಯ ನರ್ತನ
ನಾವು ನಮ್ಮದೆಂಬುದಿರಲು ಇಹಲೋಕದ ಬಂಧನ
ತೆರೆಯ ಹಿಂದೆ ಬಣ್ಣ ಬಳಿದ ಕಲಾರಸಿಕನಾವನೋ?
ಅರಿವಿನಾಳದಲ್ಲಿ ನಿಂತ ಸರ್ವಸಾಕ್ಷಿಭೂತನೋ?
ಡಿ.ನಂಜುಂಡ
03/12/2013
ಹೊನಲಿನಂತೆ ಹರಿಯುತಿಹುದು ಎನ್ನ ಎದೆಯ ಗಾನ
ಜೀವಭಾವಪಾತ್ರೆಯೊಳಗೆ ಯಾವುದದರ ಇಂಧನ?
ದೇವನಿಯತಸೃಷ್ಟಿಯೊಳಗೆ ಎಲ್ಲಿಹುದದರ ತಾಣ?
ಚಲನಮೂಲದಲ್ಲಿ ಇರಲು ಅನಂತಕಾಲಧ್ಯಾನ
ಚಲಿತನಾಟ್ಯರಂಗದಲ್ಲಿ ಎಲ್ಲಿದೆ ವರ್ತಮಾನ?
ಸಾವ ನೋವ ಚಿಂತೆಯೆಲ್ಲ ಭೂತಭವ್ಯ ನರ್ತನ
ನಾವು ನಮ್ಮದೆಂಬುದಿರಲು ಇಹಲೋಕದ ಬಂಧನ
ತೆರೆಯ ಹಿಂದೆ ಬಣ್ಣ ಬಳಿದ ಕಲಾರಸಿಕನಾವನೋ?
ಅರಿವಿನಾಳದಲ್ಲಿ ನಿಂತ ಸರ್ವಸಾಕ್ಷಿಭೂತನೋ?
ಡಿ.ನಂಜುಂಡ
03/12/2013
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ