ಭಾನುವಾರ, ಡಿಸೆಂಬರ್ 1, 2013

ಬಾ ಮತಿಸಂಚಾರಣ ಪಥದಲಿ



ಬಾ ಸನ್ಮತಿಸಂಚಾರಣಪಥದಲಿ
ಮಮ ಕಲ್ಪದ್ರುಮಕಾನನಕೆ
ಜೀವನಚೈತ್ರೋದ್ಯಾನದಿ ವಿಕಸಿತ
ಭಾವೋಲ್ಲಾಸದ ಪೂರಣಕೆ

ಸ್ವರವ್ಯಂಜನಸಂಮಿಲನೋತ್ಸಾಹದ
ಸರಿಗಮಪದರತಿಸಂಪದಕೆ
ಕವಿತಾಚಂದನಚರ್ಚಿತ ಪವನದ
ಅವಿರತಮಂದಾಲಿಂಗನಕೆ

ಝಣಝಣ ನೂಪುರನಿಯತಾವರ್ತಿತ
ಧ್ವನಿಸಂಘೋಷಣಕಾರಣಕೆ
ಆನನವಿಕಸನಧ್ಯಾನಪರಾಗಕೆ
ನಾನಾವಿಧಮನಚುಂಬನಕೆ

ಪಂಚವಟೀತಟಸಮಸೌಂದರ್ಯದ
ಪಂಚೇಂದ್ರಿಯತರುಪಲ್ಲವಕೆ
ಪಂಚವಿಪಂಚೀನಾದತರಂಗದ
ಪಂಚಾಕ್ಷರಸ್ವರಸಂಗಮಕೆ

ಬಾ ಶುಕಭಾಷಿಣಿ ಕವಿವರಪೋಷಿಣಿ
ಭಾಷಾಸಮರಸಭೋಜನಕೆ
ಕರ್ಣರಸಾಯನಗಾನಾಲಾಪಕೆ
ತರಿಕಿಟ ತೋಂ ತೋಂ ತನನನಕೆ

ಡಿ.ನಂಜುಂಡ
01/12/2013

2 ಕಾಮೆಂಟ್‌ಗಳು:

  1. ಸುಲಲಿತ ಪದ ವಿನ್ಯಾಸ, ಮಧುರವಾದ ಭಾಷಾ ಪ್ರಯೋಗ, ಲಯಬದ್ಧವಾದ ನಿಮ್ಮ ಕವಿತೆಗೆ, ನಿಮ್ಮ ಕವಿತಾ ಶಕ್ತಿಗೆ ಮತ್ತು ಆ ಶಕ್ತಿಯನ್ನು ನಿಮಗಿತ್ತ ಆ ಪರಮಾತ್ಮನಿಗೆ ಮತ್ತದನ್ನು ಕವಿತಾ ರೂಪಕ್ಕೆ ಇಳಿಸಿದ ನಿಮಗೆ ನಮಸ್ಕಾರ

    ಪ್ರತ್ಯುತ್ತರಅಳಿಸಿ
  2. ನಿಮ್ಮ ಅಭಿಮಾನ, ಆತ್ಮೀಯತೆಗಳು ಹೆಚ್ಚು ಬರೆಯುವಂತೆ ಪ್ರೋತ್ಸಾಹಿಸುತ್ತವೆ. ಧನ್ಯವಾದಗಳು

    ಪ್ರತ್ಯುತ್ತರಅಳಿಸಿ