ಸೋಮವಾರ, ಡಿಸೆಂಬರ್ 30, 2013

ಹೊಸತನವು ಬಸಿರಾಗಲಿ!



ಹೊಸವರುಷವು ಹರುಷದೆದೆಯ
ಹೊಸಿಲಿನೊಳಗೆ ದಾಟಲಿ.
ಹೊಸತನವನು ಬಸಿರಾಗಿಸಿ
ಉಸಿರುಸಿರಲಿ ಚಲಿಸಲಿ.

ಮೈಮನಗಳು ನಲಿದಾಡುತ
ಸಮರಸದಲಿ ಕುಣಿಯಲಿ.
ಮಾಮರದಲಿ ಕೋಗಿಲೆಗಳ
ಹಿಮ್ಮೇಳವು ಮೊಳಗಲಿ.

ತೊದಲ ನುಡಿಗೆ ಹೃದಯದಲ್ಲಿ
ಮುದದ ಹೊನಲು ಉಕ್ಕಲಿ.
ಮುದಿಜೀವವು ಹಿತವಾಡಲು
ಹದವರಿಯುತ ಹರಿಯಲಿ.

ಹಳತಿನೊಳಗ ಹೂಳ ತೆಗೆದು
ಒಳಿತುಗಳನು ಹೆರಕಲಿ.
ನಾಳೆಯೊಳಗೆ ನಿನ್ನೆ ಸೇರಿ
ಬೆಳಕ ಹೊತ್ತು ಮೆರೆಯಲಿ.

ಹೊಸತಾಗಲಿ ಪ್ರತಿನಿಮಿಷವು
ಹೊಸಗವಿತೆಯ ಹಾಡಲಿ.
ಹೊಸದೊಸಗೆಯು ತಾ ವಿಸರಿಸಿ
ಹೊಸ ಕಂಪನು ಸೂಸಲಿ.

ಡಿ.ನಂಜುಂಡ
30/12/2013



3 ಕಾಮೆಂಟ್‌ಗಳು:

  1. ಚಂದದ ಪದ್ಯ. ಖುಷಿಕೊಟ್ಟಿತು. ಹೊಸವರ್ಷದ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  2. ಹೊಸ ವರುಷಕೆ, ಹೊಸತನಗಳನ್ನು ಬೆದಕಿ ಅರಸುವ ಕವನ. ಇಲ್ಲಿ ನಾನು ಗಮನಿಸಿದ ಮತ್ತೊಂದು ಅಂಶ, ಹಳತರಲ್ಲೂ ಜೀವದಂಶಗಳನ್ನು ಹುಡುಕಿ, ಉಳಿದ ಜೊಳ್ಳುಗಳನ್ನು ತೂರಿಬಿಡುವ ಪ್ರಕ್ರಿಯೆ. ಎಲ್ಲವನ್ನೂ ನವೀಕರಿಸುವುದರೊಟ್ಟಿಗೆ, ಹಳತನ್ನೂ ನವೀಕರಿಸುವ ಕ್ರಿಯೆ. ಆಪ್ತವೆನ್ನಿಸಿದ ಕವನ :)

    ಪ್ರತ್ಯುತ್ತರಅಳಿಸಿ
  3. ನಿಮ್ಮ ಪ್ರೋತ್ಸಾಹಕ್ಕಾಗಿ ಕೃತಜ್ಞತೆಗಳು. ನಿಮಗೂ ಹೊಸವರುಷದ ಶುಭಾಶಯಗಳು ಈಶ್ವರ್, ಪ್ರಸಾದ್

    ಪ್ರತ್ಯುತ್ತರಅಳಿಸಿ