ಸೋಮವಾರ, ಜೂನ್ 23, 2014

ಮಗುವಿನ ನಗುವೇ ಶಿವನಾ ನಗುವು!

ಮಗುವಿನ ನಗುವೇ ಶಿವನಾ ನಗುವು
ಜಗದೊಡೆಯನ ಎದೆಯಾ ಹೂವು
ನೆಗೆದಾಡುವ ತನು ನಲಿದಾಡುವ ಮನ
ಚಿಗರೆಯ ಕಣ್ಣೋಟದ ಚೆಲುವು

ಮಗುವಿನ ಅಳುವೇ ಪರಶಿವನಳುವು
ಜಗದುದಯದ ಹಬ್ಬದ ನಲವು
ಬಾಗಿದ ಬಣ್ಣಗಳೇಳರ ಹೊಳಹು
ಬಗೆಬಗೆ ಕಣ್ ಕುಣಿತದ ಸೆಳವು

ತೊದಲುಲಿಗಳು ಮೊದಲುದಿಸಿಹ ದೇವನ
ಮೋದಾಮೋದದ ಸರಿಗಮವು
ಮುದವೀಯುವ ಪದಗೂಡಿದ ಪದ್ಯವು
ಅದು ನಗೆಗಡಲಿನ ಉಬ್ಬರವು

ಭಾವಗಳರಳಿಹ ಮಗುವಿನ ಮನಸದು
ಸಾವಿರದೆಸಳುಗಳಾ ಹೂವು
ಭವದೊಳಗವತರಿಸಿಹ ಪರಮಾತ್ಮನು
ಪವಡಿಸುತಿಹ ಸುಖದಾಸನವು
ಡಿ.ನಂಜುಂಡ
23/06/2014


2 ಕಾಮೆಂಟ್‌ಗಳು:

  1. ನನಗೆ ಅತೀವವಾಗಿ ತಟ್ಟಿದ ಕವನ.
    ಓದುತ್ತಿದ್ದಂತೆ ನನ್ನ ನಾದಿನಿಯ ಪಾಪಯ್ಯ ಧೃತಿಯನ್ನು ನೋಡುವ ಅಮಿತ ಆಶೆ ಹುಟ್ಟಿಕೊಂಡಿತು.

    ಪ್ರತ್ಯುತ್ತರಅಳಿಸಿ
  2. ತಮ್ಮ ಅನಿಸಿಕೆಯನ್ನು ನೀಡಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ