ಮಂಗಳವಾರ, ಮೇ 10, 2016

ಹೋಗಿ ಬಾ ಬೆಂಗದಿರ!

ಹೋಗಿ ಬಾ, ಬೆಂಗದಿರ! ನಾಳೆ ಬಾರೊ
ಮೂಡಣದ ಗುಡಿಯಿಂದ ಬೆಳಗ ತಾರೊ

ಈಗ ನೀ ಪಡುವಣದ ಕಡಲಾಳಕಿಳಿದು
ಅಲ್ಲಿರುವ ಚಂದಿರನ ಚಂಡಂತೆ ಪಿಡಿದು
ಬಾನ ಬಯಲಿಗೆ ಎಸೆದು ಆಡುತ್ತ ಸಾಗು
ಇರುಳ ತಿರುಳುಂಡು ಬಾಗು

ಮರದ ಗೂಡುಗಳಲ್ಲಿ ಹಕ್ಕಿಗಳು ಮಲಗಿ
ನಿದ್ದೆಯಿಂದೆದ್ದ ಮರು ಕ್ಷಣವೆ ಬೆಳಗಾಗಿ
ಚಿಲಿಪಿಲಿಯು ಬಾನಿನೊಳು ಮೊಳಗುವಾ ಹೊತ್ತು
ಜಗದಿ ಬಿದ್ದವರನೆತ್ತು

ಮಂಜಿನಾ ಮಣಿಗಳಲಿ ಮಾಲೆಯನು ಹೆಣೆದು 
ಗಿರಿಯೋರೆಕೋರೆಗಳಲಲ್ಲಲ್ಲಿ ಹಿಡಿದು
ಉಷೆಯು ಹೊಂಬಣ್ಣವನು ಚೆಲ್ಲುತಿಹ ಪಥದಿ
ಬಾರೊ ಮೂಡಣಕೆ ಮುದದಿ

ಡಿ.ನಂಜುಂಡ

10/05/2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ