ಗುರುವಾರ, ಜನವರಿ 24, 2013

ನನ್ನ ಚೆಲುವಿನ ಕವನಬಾರೆ ಭಾಮಿನಿಯೆ! ಎದೆಯ ಬಾನಿನಲಿ
ಬಣ್ಣದುಡುಗೆ ಧರಿಸಿ ಬಾ.
ತೋರೆ ಸಂಪದವ ಬೀರಿ ಹೊಸತನವ
ಸ್ವರವರ್ಣಚರಣೆ ಬಾ.

ಹೂಬನದ ಚೆಲುವೆ! ಹೊಂಬಿಸಿಲ ನಗುವೆ!
ಅಂಬರದ ದನಿಯ ಸಿರಿಯೆ!
ಚುಂಬಿಸುತ ಮನವ ಹೊಮ್ಮಿಸುತ ಹೊಳಪ
ಘಮಘಮಿಸು ಬಾರೆ ಒಲವೆ!

ಮೃದುವಾದ ಚಿಗುರ ಹದವಾದ ಹಣ್ಣ
ಮಾಧುರ್ಯ ತುಂಬಿ ಬಾರೆ.
ಅಣಿಗೊಣಿಸಿ ಸ್ವನವ ಮುದಗೊಳಿಸಿ ಮನವ
ಕಣಕಣದಿ ಕಲೆತು ಬಾರೆ.

ಭಾಮಿನಿಯೆ! ಬಾರೆ ಬಾ ಬಾನತಾರೆ!
ನೀನೆನ್ನ ಭಾವವದನ.
ಕಾಮಿನಿಯೆ! ಬಾರೆ ಕೆಂದೊಲವ ತಾರೆ
ನೀನೆನ್ನ ಮನದ ಕವನ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ