ಮಂಗಳವಾರ, ಅಕ್ಟೋಬರ್ 14, 2014

ಸಹಜ

ಚೆಲ್ಲದಿಹುದೆ ಪ್ರಕೃತಿಯೊಲವು
ಎಲ್ಲರೆದೆಯೊಳಿಳಿಯದೇ?
ಬೇಲಿಯೆಲ್ಲೆ ಮೀರಿ ಹೂವು
ಗಾಳಿಯನ್ನು ತೀಡದೇ?

ಮಣ್ಣ ಕಣದ ಸಾರವೆಲ್ಲ
ಹಣ್ಣ ತಿರುಳಿಗೇರದೇ?
ಬಣ್ಣದಳೆದ ಬುವಿಯ ಚೆಲುವು
ಕಣ್ಣ ಸೆಳೆಯದಿರುವುದೇ?

ಮಳೆಯ ಹನಿಗಳಿಳೆಗೆ ಜಾರಿ
ಬೆಳೆಯು ಬಾಗದಿರುವುದೇ?
ಆಳಕಿಳಿದ ಜಲವು ಮತ್ತೆ
ಮೇಲಕೇರಿ ಬಾರದೇ?

ಕಾಲದÀಳತೆಯನ್ನು ಮೀರಿ
ನಾಳೆಯಿಂದಿಗಿಳಿವುದೇ?
ಬಾಳ ಗಾಲಿಯರೆಗಳುರುಳಿ
ಇಳಿದು ಮೇಲಕೇರದೇ?

ಎಲ್ಲ ಬೇಕು ಎಂಬ ಸೊಲ್ಲಿ-
ಗೆಲ್ಲಿ ನಿಯತಲಯವಿದೆ?
ಸೋಲು ಗೆಲುವು ಬಾರದೆಂದೂ
ತಾಳನಿಯಮವಿಲ್ಲದೆ.

ಡಿ.ನಂಜುಂಡ

15/10/2014

2 ಕಾಮೆಂಟ್‌ಗಳು:

 1. ನಿಮ್ಮೊಳ ಆ ಶಕ್ತ ಕವಿಗೊಂದು ನಮನ.
  "ಮಳೆಯ ಹನಿಗಳಿಳೆಗೆ ಜಾರಿ
  ಬೆಳೆಯು ಬಾಗದಿರುವುದೇ?"
  ಅಲ್ಲೆಲ್ಲಿಂದಲೋ ಹನಿಸಿ, ಇಲ್ಲಿ ಬಾಗಿಸುವ
  ಕವಿತಾ ಚಾತುರ್ಯ ನಿಮ್ಮ ಸಿದ್ಧಿ.
  ವಾವ್...

  ಪ್ರತ್ಯುತ್ತರಅಳಿಸಿ
 2. ಅಭಿಮಾನದ ನುಡಿಗಳಿಗೆ ಕೃತಜ್ಞತೆಗಳು ಬದರೀನಾಥ್ ರವರೇ..

  ಪ್ರತ್ಯುತ್ತರಅಳಿಸಿ