ಮಂಗಳವಾರ, ಅಕ್ಟೋಬರ್ 7, 2014

ಬಾ ಲಲಿತೆ!

ನಲಿನಲಿದಾಡುತ ಬಾ ಲಲಿತೆ!
ನಲವಿನ ಪೂವಿಡು ಭಾವಲತೆ!

ಚೆಲುವಿನ ಚಿಗುರಲಿ ಗೆಲುವಿನ ಗೆಲ್ಲಿಡು
ಮೊಲ್ಲೆಯ ಹೂನಗೆ ಚೆಲ್ಲಾಡು
ಒಲವಿನ ಕುಡಿಕುಡಿಮೇಲಡಿಯಿಡು ನೀ
ಗಲ್ಲದ ಕುಳಿಯೊಳಗೋಲಾಡು

ಕಣಕಣವರಳಿಸಿ ಜೇನ್ಮಳೆಹನಿಯಿಡು
ಕಣ್ಣೊಳು ದಿನಕರಕಿರಣವಿಡು
ದನಿಯೊಳು ಪದಸುಮಕೇಸರಗಳನಿಡು
ಮನಕಾನನದೊಳು ಸುಳಿದಾಡು

ವದನದಿ ಶ್ರೀಶಿವಮಂತ್ರದ ಝಣವಿಡು
ಪದದೊಳಗರ್ಥದ ಚಿತ್ರವಿಡು
ವಿಧವಿಧ ವರ್ಣಗಳಾಕೃತಿದಲವಿಡು
ಹೃದಯಸರೋಜದಿ ಕುಳಿತುಬಿಡು

ಡಿ.ನಂಜುಂಡ
07/10/2014



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ