ಶನಿವಾರ, ಡಿಸೆಂಬರ್ 6, 2014

ವನಶಂಕರಿ

ಶ್ರೀವನಶಂಕರಿ! ಪಾಲಯ ಮಾಂ

ನಿತ್ಯವಿನೂತನ ತತ್ತ್ವಪ್ರಕಾಶಿತ
ಸತ್ಯಸನಾತನೇ ಹೇ ಪ್ರಕೃತಿ
ಮಿಥ್ಯಜ್ಞಾನಾನಂದಾಲಂಬಿತ
ಗತ್ಯಂತರಪದಪುಷ್ಪವತಿ

ಪರ್ಯಾವರಣಾಲಿಂಗಿತ ಸುಂದರಿ
ತರುಗಣವೇಷ್ಟಿತ ಸಂಸಾರಿ
ಮಾನವಶಿಶುಕೃತÀ ಮಲಿನವಿದೂರಿ
ಅನಿಲಾನಲಜಲಸಂಚಾರಿ

ಸಿತಹಿಮಮಣಿಗಣಮಾಲಾಧಾರಿಣಿ
ಅತಿಶಯ ರೂಪಿಣಿ ಶರ್ವಾಣಿ
ನತ ಮನಕಾನನ ನಿತ್ಯವಿಹಾರಿಣಿ
ಮತಿಸಂಚಾಲಿನಿ ಹೇ ಜನನಿ

ವಿಶ್ವಾಂತರತಮ ಚೇತನರೂಪಿಣಿ
ವಿಶ್ವವಿಲೋಕಿನಿ ವಿಭ್ರಮಣಿ
ವಿಶ್ವವಿನೋದಿನಿ ವಿಶ್ವಪ್ರಕಾಶಿನಿ
ವಿಶ್ವಕುಟುಂಬಿನಿ ಮಮ ಜನನಿ

ಡಿ.ನಂಜುಂಡ

07/12/2014

2 ಕಾಮೆಂಟ್‌ಗಳು: