ಗುರುವಾರ, ಮಾರ್ಚ್ 12, 2015

ಶಂಬರಾರಿ

ಬಂದ ಬಂದ ಶಂಬರಾರಿ
ಪಂಚಪುಷ್ಪಚಾಪಧಾರಿ
ನಿಂದ ಚೈತ್ರರಥವನೇರಿ
ಅವನೇ ಪ್ರೇಮಜ್ವರಾರಿ

ಹರಿದಂಬರ ಪರಿಶೋಭಿತ
ಗಿರಿತೀರಾರಣ್ಯವಿಹಾರಿ
ನವಕೋಕಿಲ ಕಲಕಂಠದ
ವನಘಂಟಾರವಸಂಚಾರಿ

ಕುಸುಮಾನನಮಧುಚುಂಬಿತ
ಸಂವೇದನಮನಸಂಸಾರಿ
ಯುವಕಲ್ಪಿತ ಕಾಮಿತ ವರ-
ಫಲವಿತರಣದಧಿಕಾರಿ

ಡಿ.ನಂಜುಂಡ

12/03/2015

2 ಕಾಮೆಂಟ್‌ಗಳು:

 1. ಸಂವೇದನಮನಸಂಸಾರಿ
  ರತಿಯೋತ್ಕಟ ಮನ್ಮಥನ
  ನಿಜವಾದ ಪ್ರಾರ್ಥನಾ ಗೀತೆ,
  ಇದು ಭಟ್ಟರ ಕೊಡುಗೆ!

  ವ್ಹಾವ್:
  ವನಘಂಟಾರವಸಂಚಾರಿ

  ಪ್ರತ್ಯುತ್ತರಅಳಿಸಿ