ಪ್ರಕೃತಿಮಾತೆ ಪ್ರಾಣದಾತೆ
ಪಂಚಭೂತರೂಪಿಣಿ
ಅಖಿಲಜೀವಜನ್ಮದಾತೆ
ಸಕಲ ಕಾರ್ಯಕಾರಣಿ
ಅನ್ನದಾತೆ ಜಲವಿದಾತೆ
ಕ್ಷುತ್ಪಿಪಾಸಹಾರಿಣಿ
ನಿತ್ಯಹರಿದ್ವರ್ಣವಿಪಿನ-
ಪುಷ್ಪಗಂಧಧಾರಿಣಿ
ವರ್ತಮಾನಕಾಲಾವೃತೆ
ಭೂತಭವ್ಯವರ್ಜಿತೆ
ವೇದಪುರಾಣೇತಿಹಾಸ-
ಕಾವ್ಯರಸಾಕರ್ಷಿತೆ
ಸರ್ವಾಪಗಸಂಜೀವಿನಿ
ಜೀವಾಮೃತವರ್ಷಿಣಿ
ಸಕಲಭುವನಸೃಷ್ಟಿಮೂಲ-
ಬೀಜಾಂಕುರಗೋಪಿನಿ
ಪಾಹಿ ಪಾಹಿ ಪ್ರಕೃತಿಮಾತೆ
ಪರಮಸೌಖ್ಯದಾಯಿನಿ
ಜನನಮರಣಜರೇತ್ಯಾದಿ
ಭವಭಯಾಪಹಾರಿಣಿ
ಡಿ.ನಂಜುಂಡ
21/03/2015
ಕ್ಷುತ್ಪಿಪಾಸಹಾರಿಣಿ, ಬೀಜಾಂಕುರಗೋಪಿನಿ ಎರಡೂ ಉತ್ತಮ ರಚನೆಗಳು. ತುಂಬ ಇಷ್ಟವಾಯಿತು.
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿ