ಭಾನುವಾರ, ಮಾರ್ಚ್ 8, 2015

ವಿಶ್ವವನಿತೆ!

ಪ್ರಕೃತಿಮಾತೆ! ವಿಶ್ವವನಿತೆ!
ಹೇ! ಸ್ವಯಂ ಪ್ರಕಾಶಿತೆ!
ಚೇತನೇತ್ಯಚೇತನೇತಿ
ಸರ್ವಭೂತಶೋಭಿತೆ!

ಅಖಿಲಜೀವಕೋಟಿಜಾತೆ!
ಆಂತರ್ಯವಿರಾಜಿತೆ!
ಸಕಲಭುವನಬೀಜರೂಪ
ಹೃತ್ಸರೋಜಸಂಸ್ಥಿತೆ!

ನಿಗಮಾಗಮಸನ್ನಿಹಿತೆ!
ಸ್ವರವ್ಯಂಜನರಂಜಿತೆ!
ಋಷಿದರ್ಶಿತ ಕವಿಕರ್ಷಿತ
ಭಾವವರ್ಣಪರಿವೃತೆ!

ಪಾಹಿ ಪಾಹಿ ಜಗನ್ಮಾತೆ!
ನಾಮರೂಪವರ್ಜಿತೆ!
ಸರ್ವನಾಮಗುಣವಾಚಕ
ಕಾಲತ್ರಯಕಲ್ಪಿತೆ!

ಡಿ.ನಂಜುಂಡ
08/03/20152 ಕಾಮೆಂಟ್‌ಗಳು:

 1. ಮೊದಲಿಗೆ ಸಮಸ್ತ ಸ್ರೀ ಮೂರ್ತಿಗಳಿಗೆಲ್ಲ ಮಹಿಳಾ ದಿನಾಚರಣೆಯ ಶುಭಾಶಯಗಳು.

  ಆಕೆ ಎಲ್ಲವೂ ಮತ್ತು ಸರ್ವವೂ
  ಹೇಗೆಂದರೆ,
  "ಋಷಿದರ್ಶಿತ ಕವಿಕರ್ಷಿತ'

  ಪ್ರತ್ಯುತ್ತರಅಳಿಸಿ
 2. ಕೃತಜ್ಞತೆಗಳು ಬದರೀನಾಥ್ ಪಲವಲ್ಲಿಯವರೇ..

  ಪ್ರತ್ಯುತ್ತರಅಳಿಸಿ