ಭಾನುವಾರ, ಮಾರ್ಚ್ 29, 2015

ರಾಮನಾಮಮದ್ಯಪಾನ

ರಾಮನಾಮದಮಲಿನಲ್ಲಿ
ತೇಲುತಿಹಳೆ ಜಾನಕಿ?
ರಾಮಹೃದಯಕಮಲನಾಲ-
ಮಧುವಾದಳೆ ಜಾನಕಿ?

ಮದವೇರಿದ ಚಿತ್ತದೊಳಗೆ
ಪಿತ್ತರಸವನಿಟ್ಟಳೇ?
ಹತ್ತು ತಲೆಗಳೊಳಗೆ ನೂರು
ಕಲ್ಪನೆಗಳ ಹೆತ್ತಳೇ?

ವನವನಗಳನಲೆದು ಅಲೆದು
ಗೆಡ್ಡೆಗೆಣಸನಾಯ್ದಳೇ?
ಬಂಗಾರದ ಮೋಹದಿಂದ
ಜಿಂಕೆಗೆ ಮನಸೋತಳೆ?

ಕಾಮರೂಪಕನಕಮಯ
ಲಂಕೆಯನ್ನು ಸುಟ್ಟಳೆ?
ರಾಮಚರಿತಮಾನಸಕ್ಕೆ
ಮತ್ತೆ ಪುಟವನಿಟ್ಟಳೇ?

ರಾಮಮಹಾನ್ವೇಷಣೆಯಲಿ
ನಾವೆಲ್ಲರೂ ಹನುಮರೇ?
ರಾಮಾಯಣದರ್ಶನದಲಿ
ನಾವೆಲ್ಲರೂ ಋಷಿಗಳೇ?

ಡಿ. ನಂಜುಂಡ

29/03/2015

2 ಕಾಮೆಂಟ್‌ಗಳು:

  1. ರಾಮನಾಮಮದ್ಯಪಾನದಲಿ ನಾವೂ ಸಮಭಾಜಮರೇ.

    ರಾಮದಾಸುವು ಹೇಳುವಂತೆ:
    ಶ್ರೀರಾಮ ನೀನಾಮಮೆಂತ ಮಧುರಂ

    ಪ್ರತ್ಯುತ್ತರಅಳಿಸಿ
  2. ನಿರಂತರವಾಗಿ ನನ್ನ ಬ್ಲಾಗನ್ನು ಓದಿ ಮೆಚ್ಚುಗೆ ಸೂಸುತ್ತಿರುವ ಪಲವಲ್ಲಿಯವರಿಗೆ ಕೃತಜ್ಞತೆಗಳು

    ಪ್ರತ್ಯುತ್ತರಅಳಿಸಿ