ಸೋಮವಾರ, ಆಗಸ್ಟ್ 10, 2015

ಪಾಹಿ ಮಾಂ ಪಾರ್ವತೀಪತೇ

ಪರ್ವತಾಗ್ರವಾಸಿ ದೇವ ಪಾರ್ವತೀಪತೇ
ಸರ್ವಮಂಗಳಾಂಗ ದೇವ ಶಾರ್ವರೀಮತೇ
ಪಂಚಭೂತಪತೇ ದೇವ ಹೇ ನಮೋsಸ್ತು ತೇ
ಪಾಹಿ ಮಾಂ ಪಾಹಿ ಮಾಂ ಪಾರ್ವತೀಪತೇ

ಮನಸಿಜಾರಿ ಮನೋಹಾರಿ ಆಂತರ್ಯಸುವಿಹಾರಿ
ಧ್ಯಾನಾಚಲಮೂಲೋದ್ಭವಗಂಗಾಮೃತಧಾರಿ
ವನಚರಸಂಸಾರಿ ವನಘಂಟಾರವಸಂಚಾರಿ
ಪಾಹಿ ಮಾಂ ಪಾಹಿ ಮಾಂ ಸರ್ವರುಜಾಪಹಾರಿ

ಮೌನಾಂಬುಧಿಮಥನಜಾತ ಸುಂದರೇಂದುಭೂಷಣ
ಜ್ಞಾನವಹ್ನಿಸಂದೀಪಿತ ಪವಿತ್ರಾತ್ಮಧಾರಣ
ಪಂಚಾನನ ಅಗ್ನಿನಯನ ಕಾಲತ್ರಯಕಾರಣ
ಪಾಹಿ ಮಾಂ ಪಾಹಿ ಮಾಂ ಸರ್ಪಭೂಷಣ

ಡಿ.ನಂಜುಂಡ
10/08/2015


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ