ಶುಕ್ರವಾರ, ಆಗಸ್ಟ್ 7, 2015

ಪಾಹಿ ಪಾಹಿ ಪ್ರಕೃತಿದೇವಿ!

ಪಾಹಿ ಪಾಹಿ ಪ್ರಕೃತಿದೇವಿ ಆದಿಶಕ್ತಿರೂಪಿಣಿ
ಪಾಹಿ ಪಾಹಿ ಪರ್ವತಾಗ್ರಪರಮಪದ್ಮವಾಸಿನಿ

ಅಷ್ಟಮೂರ್ತಿಶಿವಸ್ವರೂಪಸೃಷ್ಟಿತತ್ತ್ವಚಾಲಿನಿ
ಇಷ್ಟವಸ್ತುವಿಷಯಮೂಲಸತ್ತ್ವಗುಣವಿಶೇಷಿಣಿ

ಕಾರ್ಯಕಾರಣೇಕ ಮಾತೇ ಜಗತ್ಪ್ರಸೂತಿಕಾರಿಣಿ
ಸೂರ್ಯಚರಣಚಲಿತ ಕಿರಣಸಪ್ತವರ್ಣಚಾರಿಣಿ

ಸರ್ವಮಂಗಳಾಂಗದೇವಿ ಭವಭಯಾಪಹಾರಿಣಿ
ಶರ್ವಸಂಗತುಷ್ಟದೇವಿ ವಿಶ್ವಶಾಂತಿದಾಯಿನಿ
ಡಿ.ನಂಜುಂಡ

07/08/2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ