ಆರಾರೋ ಬೆವರಿಳಿಸಿ ಬೆಳೆದ ಕಾಳ್ಗಳು ಬೆಂದು
ಬೆಂಬಿಡದೆ ಕಾಯುತಿರೆ ಕಣಕಣದಿ ನಿಂದು
ಭಾವವೋ ಭಕುತಿಯೋ ಭವಭೋಗ ಭುಕ್ತಿಯೋ
ಬಾನಗಲದೊಲವಾಗಿ ಬಾಳಿನಲಿ ಬಂದು
ಬರಿಯೆದೆಗೆ ಬನದುಸಿರ ಐಸಿರಿಯ ಬಲತುಂಬಿ
ಬಯಲಿಂದ ಬೇಕಿಹುದ ಬರಸೆಳೆದು ತಂದು
ದಿವ್ಯವೋ ಭವ್ಯವೋ ಭಾವಾಗ್ನಿಜಿಹ್ವೆಯೋ
ಬಳುಕುತಿರೆ ಬೆಳಕ ಕುಡಿ ಕಾವ್ಯದೊಳು ನಿಂದು
ಕವಿಗಳೆಲ್ಲರೂ ಕೂಡಿ ಎದೆಮಣ್ಣ ಪಸೆ ಮಾಡಿ
ಹದಗೊಳಿಸುತಲಿ ಕನಸುಗಳ ಬಿಕ್ಕುತಿಹರು
ಅಕ್ಕರಕ್ಕರವೊಕ್ಕಿ ಚಿಕ್ಕ ನುಡಿಗಳ ಹೆಕ್ಕಿ
ಸಿಕ್ಕವರ ಕರೆಕರೆದು ಹಂಚಿ ನಗುತಿಹರು
ಡಿ.ನಂಜುಂಡ
13/08/2015
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ