ಏನು ಸುಂದರ!..ಆಹಾ! ಅದೆಂಥ ಮಂದಿರ…!
ಶಂಕರಿಯ
ಬನವಿದುವೆ.. ಭುವನಸುಂದರ!
ಹಸಿರೆಲೆಗಳ
ಸೀರೆಯ ಸೊಬಗು ಸುಂದರ.
ತೊರೆತೊರೆಗಳ
ಹರಿವಿನ ಆ ರವದ ಇಂಚರ.
ಸುಮಗಳ
ಪರಿಮಳ… ಬಳ್ಳಿಗಳಾ ಹಂದರ..
ಎಲೆಗಳಾ
ಮೆದು ಹಾಸಿರಲು
ಬಾಗಿದೆ
ಬಾನಲಿ ಬೆಳದಿಂಗಳ ಚಂದಿರ
ಶಂಕರನ
ಸೆಳೆದಿರಲು..
ಬನಶಂಕರಿಯು
ಬಂಧುರ…ಬಲು ಸುಂದರ
ಬನಬನವೂ
ಸೊಬಗ ಮಂದಿರ.