ತಾಯಿಬೇರಿನ ಸಾರ ಸೆಳೆಯುತ
ಮರವು ಭರದಲಿ ಚಿಗುರಿದೆ.
ತಾಯಿ ಕರುಳಿನ ಕರೆಯನಾಲಿಸಿ
ಬಲಿತ ಎಲೆಯದು ಉದುರಿದೆ.
ಎಲೆಯು ಮಣ್ಣಲಿ ಬೆರೆತು
ಕೊಳೆಯುತ
ತಾಯಿಬೇರನು ಸೇರಿದೆ.
ಮಮತೆಯೆರೆದಾ ತಾಯಿಯುದರಕೆ
ತಾನೆ ಸಾರವನುಣಿಸಿದೆ.
ಮರವು ಬೇರಿಗೆ ನೀರನುಣಿಸಲು
ಕರಿಯ ಮುಗಿಲನು ಸೆಳೆದಿದೆ.
ಮರದ ಮಮತೆಯ ಕರೆಯನಾಲಿಸಿ
ಮುಗಿಲು ಮಳೆಯನು ಸುರಿಸಿದೆ.
ಮುಗಿಲ ಮಳೆಯಲಿ ಮರವು ಅರಳಿದೆ
ಚಿಗುರು ಚಿಗುರಲಿ ನಗುವಿದೆ.
ಮಳೆಯ ಗಾಳಿಗೆ ಎಲೆಯು
ಉದುರಿದೆ
ತಾಯಿಮಡಿಲಲಿ ಮಲಗಿದೆ.
ಮರದ ಮಮತೆಯ ಮನುಜ ತಳೆಯಲಿ
ಕಣ್ಣ ಪೊರೆಯನು ಕಳಚಲಿ.
ತಾಯಿಬೇರಿಗೆ ಸಾರವುಣಿಸಲಿ
ಜೀವದಾ ಋಣ ಅರಿಯಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ