ಭಾವಚೈತ್ರದ ಆದಿಪರ್ವಕೆ
ಕವಿತೆ
ತಳಿರಿನ ತೋರಣ.
ಮತ್ತ
ಕುಕಿಲದ ಕೊರಳ ಇಂಪಿಗೆ
ನವ್ಯ
ಪಲ್ಲವಪೂರಣ.
ಹೃದಯ
ಕುಸುಮದ ಮಧುರ ಜೇನಿಗೆ
ಚಿತ್ತಭ್ರಮರದ
ಚಾರಣ.
ರಸನದೊಳಗಿನ
ಸಿಹಿಯ ಚಪಲಕೆ
ಭವ್ಯ
ಕರಣವೆ ಹೂರಣ.
ಕರ್ಣಮೋಹನರಾಗತಾನಕೆ
ಚರಣ ಮಾರ್ದನಿ
ಕಾರಣ.
ಅಂತರಂಗದ
ಗಾನಲಾಸ್ಯಕೆ
ಪ್ರಣವನಾದವೆ
ಪ್ರೇರಣ.
ಚೈತ್ರರಥದಲಿ
ಮದನಚುಂಬನ
ಬಾಹುಬಂಧನ
ಸ್ವೇದನ.
ಭಾವಗಾನದ
ದನಿಯ ಸ್ಪಂದನ
ಕಾವ್ಯರತಿಯಾ
ಬಂಧನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ