ಬುಧವಾರ, ಫೆಬ್ರವರಿ 20, 2013

ಅರ್ಥತತ್ತ್ವ-ತತ್ತ್ವಾರ್ಥ!


ಅರ್ಥತತ್ತ್ವ-ತತ್ತ್ವಾರ್ಥ!
*****************
ಬಯಕೆಗಾಗಿ ದುಡಿಮೆ ಮಾಡಿ,
ತೃಪ್ತಿಯನ್ನು ಹೊಂದಬೇಕು,
ಭೋಗದಿಂದ ಬದುಕು- ಇದುವೆ
ಅರ್ಥಶಾಸ್ತ್ರದ ತತ್ತ್ವವು.

ಬಯಕೆಗಳಿಗೆ ಮಿತಿಯುಬೇಕು,
ಸರಳ ಬಾಳು ಬಾಳಬೇಕು,
ಮಿತವೆ ಹಿತದ ಬದುಕು-ಇದುವೆ
ತತ್ತ್ವಶಾಸ್ತ್ರದ ಅರ್ಥವು.

ಷೇರುಗಳನು ಕೊಳ್ಳಬೇಕು,
ಲಾಭವನ್ನು ಮಾಡಬೇಕು,
ಕೊಳ್ಳುಬಾಕನಾಗು-ಇದುವೆ
ಅರ್ಥಶಾಸ್ತ್ರದ ತತ್ತ್ವವು.

ಮೋಸವಿರದ ಗಳಿಕೆ ಬೇಕು
ದಾನಧರ್ಮ ಮಾಡಬೇಕು
ಸಮತೆಯಿಂದ ಬಾಳು-ಇದುವೆ
ತತ್ತ್ವಶಾಸ್ತ್ರದ ಅರ್ಥವು.

ತತ್ತ್ವಶಾಸ್ತ್ರದರ್ಥವನ್ನು
ಅರ್ಥಶಾಸ್ತ್ರ ಕಾಣಬೇಕು.
ಅರ್ಥಶಾಸ್ತ್ರ-ತತ್ತ್ವಗಳಿಗೆ
ತತ್ತ್ವಶಾಸ್ತ್ರದ ನೆರಳು ಬೇಕು.2 ಕಾಮೆಂಟ್‌ಗಳು:

  1. ಪದ್ಯದಲ್ಲಿ ಅರ್ಥಶಾಸ್ತ್ರದ ಮಹತ್ವವನ್ನು , ಅರ್ಥವನ್ನು ತಿಳಿಸಿದ್ದೀರಿ. ತುಂಬಾ ಚೆನ್ನಾಗಿ ಮೂಡಿ ಬಂದಿದೆ

    ಪ್ರತ್ಯುತ್ತರಅಳಿಸಿ