ನಾನಿಲ್ಲದಿದ್ದರೂ ಬಾನಿಹುದು ನೋಡ
ತಾನನದ ದನಿಯಿಹುದು ಎಲ್ಲೆಲ್ಲೂ ಕೇಳ
ನಾಳೆಗಳ ಎಣಿಕೆಯಲಿ ಈ ಕ್ಷಣವ ಮರೆತರೂ
ಕಾಲತಾಳಕೆ ಮಳೆಯು ಸುರಿಯುವಂತೆ
ಜಲಮೂಲಗಳಿಗೆಲ್ಲ ವಿಷವುಣಿಸುತಿದ್ದರೂ
ಇಳೆಯೆಡೆಗೆ ನೀರದನು ಜಾರುವಂತೆ
ತಾರೆಗಳ ತೋಟಕ್ಕೆ ಮೇರೆಯಿಲ್ಲವಾದರೂ
ಯಾರೋ ಎಲ್ಲವನೂ ಕಾಯುವಂತೆ
ಆ ರವಿಯ ಕಿರಣಗಳು ಸರಿಗಮದ ನಡೆಯಲ್ಲಿ
ಸ್ವರದ ಭಾವಕೆ ಬಳುಕಿ ಬಾಗುವಂತೆ
ಇದೆ ನೋಡು ಈ ಜಗವು ಲಯಬದ್ಧ ಹಾಡಂತೆ
ಪದವೊಂದು ಅಂಕುರಿಸಿ ಬೆಳೆದು ಬೆಳೆದು
ಎದೆಯುಸಿರ ತಾ ತುಳಿದು ಬಾನಗಲ ಸಂಚರಿಸಿ
ನಾದದಲೆಯಲಿ ತೇಲಿ ನಲಿಯುತಿಹುದು
ಡಿ.ನಂಜುಂಡ
21/07/2014
’ ಜಲಮೂಲಗಳಿಗೆಲ್ಲ ವಿಷವುಣಿಸುತಿದ್ದರೂ
ಪ್ರತ್ಯುತ್ತರಅಳಿಸಿಇಳೆಯೆಡೆಗೆ ನೀರದನು ಜಾರುವಂತೆ’
ಮತ್ತು
ಶೀರ್ಷಿಕೆಗೆ ನಮ್ಮ ಶರಣು.
ಮೆಚ್ಚುಗೆಯೊಂದಿಗೆ ನಿಮ್ಮ ಅಭಿಪ್ರಾಯ ದಾಖಲಿಸಿದ್ದಕ್ಕೆ ಕೃತಜ್ಞತೆಗಳು
ಪ್ರತ್ಯುತ್ತರಅಳಿಸಿ