ಗೀತವಾಗು, ಕೃಷ್ಣ! ಸಂ-
ಪ್ರೀತನಾಗು
ಮಾತುಗಳನು ಮಥಿಸಿ ನವ-
ನೀತನಾಗು
ಪ್ರೀತನಾಗು
ಮಾತುಗಳನು ಮಥಿಸಿ ನವ-
ನೀತನಾಗು
ಸೇತುವಾಗು, ಮೋಕ್ಷ-
ಹೇತುವಾಗು
ಭೂತವಿಷಯಪಂಚಾಮೃತ-
ಧಾತುವಾಗು
ಹೇತುವಾಗು
ಭೂತವಿಷಯಪಂಚಾಮೃತ-
ಧಾತುವಾಗು
ಶಾಂತನಾಗು, ಮನದ
ಕ್ಷಾಂತಿಯಾಗು
ನಾಂತಚಿಂತನಾಂತರಂಗ-
ಕಾಂತನಾಗು
ಕ್ಷಾಂತಿಯಾಗು
ನಾಂತಚಿಂತನಾಂತರಂಗ-
ಕಾಂತನಾಗು
ಭೋಗವಾಗು, ಮಧುರ-
ರಾಗವಾಗು
ಯೋಗರಾಜಮಾರ್ಗಕಾವ್ಯ-
ರಾಗಿಯಾಗು
ರಾಗವಾಗು
ಯೋಗರಾಜಮಾರ್ಗಕಾವ್ಯ-
ರಾಗಿಯಾಗು
ನಾಥನಾಗು, ಹೃದಯ-
ಜ್ಞಾತನಾಗು
ಓತಪ್ರೋತಭಾವಗೀತ-
ಜಾತನಾಗು
ಜ್ಞಾತನಾಗು
ಓತಪ್ರೋತಭಾವಗೀತ-
ಜಾತನಾಗು
ಡಿ.ನಂಜುಂಡ
27/07/2017
27/07/2017
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ