ಮಂಗಳವಾರ, ಸೆಪ್ಟೆಂಬರ್ 10, 2013

ನನ್ನ ಮುದ್ದು ಚಿನ್ನ ನೀನು!ನನ್ನ ಮುದ್ದು ಚಿನ್ನ ನೀನು!
ಸನಿಹವಾದೆ ಹೃದಯಕೆ.
ಒಲವಿನುರಿಯಲಿ ಪುಟಗೊಂಡು
ಹೊಳಪನೆರೆದೆ ಬಾಳಿಗೆ.

ಉಸಿರಕಣದಿ ಒಸರಿಸಿರುವೆ
ಹೊಸಹರುಷದ ಒರತೆಯ.
ಬಿಸಿಯುಸಿರಲಿ ಬೆಸುಗೆಗೊಂಡು
ಒಲವ ಕುಸುರಿಯಾದೆಯ?

ಮೈಮನಗಳ ಅಲಂಕರಿಸಿ
ಅಮಿತಸುಖವ ಸುರಿಸಿದೆ.
ಧಮನಿಗಳಲಿ ಧುಮ್ಮಿಕ್ಕುವ
ಪ್ರೇಮನದಿಯ ಹರಿಸಿದೆ.

ಆಸೆಯೆಲ್ಲ ಮೂಸೆಯಾಗೆ
ಪಿಸುಮಾತಿನ ಎರಕಕೆ.
ರಸವಿದ್ಯೆಯ ಪರಿಪಾಕದಿ
ಒಸಗೆಯಾದೆ ಬಾಳಿಗೆ.
ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ