ಸೋಮವಾರ, ಸೆಪ್ಟೆಂಬರ್ 16, 2013

ಗೀರ್ವಾಣೀಪದಲಾಲಿತ್ಯಝಣಝಣ ನೂಪುರಧ್ವನ್ಯಾವರ್ತಿತ
ಪ್ರಣವಾಂತರ್ಗತ ಸಾಹಿತ್ಯ.
ಸರ್ವಾಕರ್ಷಿತ ನವರಸಚೋದಿತ
ಗೀರ್ವಾಣೀಪದಲಾಲಿತ್ಯ.

ದೃಷ್ಟಿವಿಗೋಚರ ಶಕ್ತ್ಯಾಲಂಬಿತ
ಸೃಷ್ಟಿವಿಕಂಪಿತ ಝೇಂಕಾರ.
ರಮ್ಯಮನೋಹರ ಸುಮಹಿತಸುಂದರ
ಗಮ್ಯಪದೇಕಾಲಂಕಾರ.

ಇಂದ್ರಾದಿತ್ಯಾನಿಲಾನಲವರುಣ-
ವೃಂದಸುಪೂಜಿತ ಪ್ರಾಕಾರ.
ಚಂದ್ರಾಲಂಕೃತ ಶಿವಮುಖಚುಂಬಿತ
ಗಂಗಾನನಸಿಂಚಿತಧಾರಾ.

ಋಷಿಗಣದರ್ಶಿತ ಪಂಡಿತಮರ್ಶಿತ
ಮೃದುಗತಿಸಂಪದಸಂಚಾರ.
ಭಾರತಮಾತಾಪೋಷಿತಭಾಷಾ-
ಚಾರುಶ್ರುತಿಲಯಸಂಸ್ಕಾರ.

ಡಿ.ನಂಜುಂಡ.
16/9/2013

4 ಕಾಮೆಂಟ್‌ಗಳು:

  1. ಒಂದು ಸಣ್ಣ ಪ್ರಾಸದಲ್ಲಿ ವ್ಯತ್ಯಾಸವಾದ್ದು ಬಿಟ್ಟರೆ ಚೆನ್ನಾಗಿದೆ ಗುರುಗಳೇ.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ ಈಶ್ವರ್ ಭಟ್. ಪ್ರಾಸ ತರಬಹುದಿತ್ತು. ಬಲಾತ್ಕರಿಸಿ ತಂದರೆ ಸಹಜತೆ ಕೆಡುತ್ತದೆಯೆಂದು ಬಿಟ್ಟಿದ್ದೇನೆ.

    ಪ್ರತ್ಯುತ್ತರಅಳಿಸಿ
  3. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ