‘ಬಾರೊ ಗುರುವೆ ಬಳಿಗೆ’ ಎಂಬ
ಕರೆಗೆ ಅರ್ಥವಿಲ್ಲದಿಂದು
ಚರಾಚರದಿ ಚಲನೆಯಿರದ
ಸ್ಥಿರವು ನೀನು ಆಗಿರೆ.
ತೀರವಿರದ ನಿನ್ನ ಕರುಣೆ
ಹರಿಯುತಿರಲು ಏಕರಸದಿ
‘ತೋರು ಕೃಪೆಯ' ಎಂದು ನಾನು
ಗುರುವೆ! ಹೇಗೆ ಬೇಡಲಿ?
ಮೂರು ಕಾಲದರಿವು ಇರುವ
ಪರಮಪದದ ದಿವ್ಯಶ್ರುತಿಯ
ಚರಣದನಿಯ ಪ್ರಣವನಾದ-
ಸ್ವರವ ಹೇಗೆ ಉಲಿಯಲಿ?
ನಿನ್ನೆ, ಇಂದು, ನಾಳೆ ಎಂಬ
ಎಣಿಕೆಯೊಳಗೆ ಮಗ್ನನಾಗಿ
ನನ್ನ ಒಳಗೆ ಇರುವ ನಿನ್ನ
ಕಾಣದಾದೆ ಕಣ್ಣಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ