ಮಂಗಳವಾರ, ಜುಲೈ 14, 2015

ಉಳುಮೆ ಮಾಡು

ಉಳುಮೆ ಮಾಡು ರಂಗ! ಬಾರೋ
ಉಳುಮೆ ಮಾಡೋ
ಚಿತ್ತಭೂಮಿಯುತ್ತಿ ಬಿತ್ತಿ
ಬೆಳೆಯ ತೆಗೆಯೋ

ಎಲ್ಲ ಬೇಕು ಎಂದು ಬಯಸಿ
ಸಾರ ಕಳೆದುಕೊಂಡ ಎನ್ನ
ಚಿತ್ತಭೂಮಿಯನ್ನು ಬೇಗ
ಸತ್ತ್ವಗೊಳಿಸೋ

ಕರಣಗಳನು ಮಣ್ಣುಗೊಳಿಸಿ
ಮನವÀ ನೀರಿನಂತೆ ಉಣಿಸಿ
ಚಿತ್ತಭೂಮಿಯನ್ನು ದಿನವೂ
ಉಳುಮೆ ಮಾಡೋ

ಉಳುಮೆಯಿಂದ ಬಂದ ಕಾಳ
ಹೆಕ್ಕು ಬಾರೋ ಒಕ್ಕು ಬಾರೋ
ಎದೆಯ ತುಂಬ ಸುಗ್ಗಿ ಹಾಡಿ
ಕುಣಿದು ಬಾರೋ

ಡಿ.ನಂಜುಂಡ

14/07/2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ