ಭಾನುವಾರ, ಜುಲೈ 5, 2015

ಏಕೆ?

ಹಲಸಿನ ಹಣ್ಣಿನ ಮೇಣಕೆ ಅಂಟಿದ
ನೊಣದಂತಿರುವಾ ಮನಸೇಕೆ?
ಬಿಡಲೂ ಆಗದ ಬಿಡುಗಡೆಯಾಗದ
ಆಸೆಯ ನಂಟಿನ ಹಂಗೇಕೆ

ನಾಳೆಯ ನೋವ್ಗಳನಿಂದೇ ಚಿಂತಿಸಿ
ಆನಂದವ ಮುಂದೂಡುವುದೇಕೆ?
ಸಾವಿನ ಅಪ್ಪುಗೆ ನಿಶ್ಚಿತವಾದರೂ
ತ್ಯಾಗಕೆ ಮನವೊಪ್ಪದು ಏಕೆ?

ಬೆವರಿಲ್ಲದೆಯೇ ಬಂದಿಹ ಸೊತ್ತನು
ಭೋಗಿಸಿ ಸುಖಿಸಲು ಹಿಗ್ಗುವುದೇಕೆ?
ಮೈಮನವೊಗ್ಗಿಸಿ ಬಾಗಿಸಿ ದುಡಿದಿಹ
ಅನ್ನವನುಣ್ಣಲು ಅಳುಕೆಮಗೇಕೆ?

ಡಿ.ನಂಜುಂಡ

05/07/2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ