ಚುಚ್ಚು ಮಾತಿನ ಚೂರಿ ಹೆತ್ತವರ ಇರಿಯುತಿರೆ
ರಕುತವದು
ಒಡಲೊಳಗೆ ಒಸರುತಿಹುದು.
“ಅಂಟಿಲ್ಲ
ಚೂರಿಯಲಿ ಒಂಚೂರು ಕೆಂಪುಹನಿ”,
“ನಾನೇನು
ಚುಚ್ಚಿಲ್ಲ” ಎನ್ನುತಿಹರು.
ಹೆತ್ತಾಗ
ಹೊರಸುರಿದ ಕೆಂಪನ್ನು ಕಂಡಿಲ್ಲ
ಕರುಳು
ಉಣಿಸಿದ ರಸಕೆ ಬೆಲೆಯೆ ಇಲ್ಲ.
“ಹಡೆದಿಟ್ಟೆ
ನೀನೆನ್ನ, ಏನಾಸ್ತಿ ಮಾಡಿಟ್ಟೆ”?
ಎನ್ನುತಲೆ
ಅನುದಿನವು ಚುಚ್ಚುತಿಹರು.
ಹೆತ್ತ
ಕರುಳಿನ ಕೂಗು ಕೇಳಿಸದ ಮಕ್ಕಳಿಗೆ
ಅರಿವೊಂದು
ಏಕಿಲ್ಲ ಬದುಕಿನಲ್ಲಿ?
ಹೆರುವ
ನೋವಿನ ಕೂಗು ಕೇಳಿಸದು ದಿಟವಹುದು
ಮಗುವಾಗೆ
ಉಳಿಯುವರೆ ಕಡೆಯವರೆಗೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ