ಮಂಗಳವಾರ, ಮೇ 21, 2013

ಅನಿರ್ಬಂಧಿತ ಪ್ರೇಮಬಂಧವಿಲ್ಲದ ಪ್ರೇಮ ಬ್ರಹ್ಮಾಂಡವ್ಯಾಪಿಸಿದೆ
ನಿರ್ಬಂಧವಾಗಲದು ಸಂಕುಚಿಸಿದೆ.
ಅನಿರ್ಬಂಧಪ್ರೇಮವದೆ ನಿರವದ್ಯಶಾಶ್ವತವು
ಎಲ್ಲೆಲ್ಲು ಸಮನಾಗಿ ವಿಸ್ತರಿಸಿದೆ.

ಪ್ರತಿಫಲದ ಆಸೆಯಲಿ ಪ್ರೇಮಿಸುವ ನಾವುಗಳು
ಸುಖದುಃಖಪಾಶದಲಿ ಸಿಲುಕಿರುವೆವು.
ಫಲವ ಬಯಸದ ಪ್ರೇಮ ಹೃದಯದಲಿ ನೆಲೆಯಾಗೆ
ನಿತ್ಯವಾಗುವುದೆಮಗೆ ಮುಕ್ತಿಪದವು.


ಬಂಧವಿಲ್ಲದ ಪ್ರೇಮ ನಿತ್ಯವಾಗಲು ನಮಗೆ
ಸಚ್ಛಿದಾನಂದವದು-ಬ್ರಹ್ಮಪದವು.
ನಿರ್ಬಂಧವಾದೊಡನೆ ಕಾಮಾದಿಬಂಧನದಿ
ಕ್ಷಣಿಕವಾಗುವುದದೇ-ಮೋಹಪದವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ