ಸೋಮವಾರ, ಮೇ 6, 2013

ಮುಂಗಾರಿನ ಆಗಮನ



ಕಾರ್ಮೋಡದ ಕೊಡೆಯರಳಿದೆ
ವೈಶಾಖದ ಬಿಸಿಲಿನಲಿ.
ನಡುಹಗಲಲೆ ಕರಿಗತ್ತಲು
ಕವಿದಿದೆ ಗಿರಿಸೆರಗಿನಲಿ.

ಕೋಲ್ಮಿಂಚಿನ ಕರದೀಪವು
ಸಾಲ್ಗಟ್ಟಿದೆ ಬಾನಿನಲಿ.
ಇಳೆಗಿಳಿಯಲು ಪಥತೋರಿದೆ
ಮುಂಗಾರಿಗೆ ಹಗಲಿನಲಿ

ತಂಗಾಳಿಯು ಕುಣಿದಾಡಿದೆ
ಮಳೆಸುರಿಯುವ ಸುಳಿವಿನಲಿ.
ಕೈಬೀಸಿವೆ ಹೆಮ್ಮರಗಳು
ತಲೆದೂಗುತ ಹರುಷದಲಿ.

ಕಾರ್ಗಲ್ಲಿನ ಕಾವಲಿಗಳು
ಕಾದಿರೆ ಬಿರುಬಿಸಿಲಿನಲಿ.
ತಂಪಾಗಿದೆ ವೈಶಾಖವು
ಮಿಂದಿದೆ ಮಳೆಹನಿಗಳಲಿ.





2 ಕಾಮೆಂಟ್‌ಗಳು:

  1. ಮುಂಗಾರಿನ ಆಗಮನವನ್ನು ಲಯಬದ್ಧವಾಗಿ ಸ್ವಾಗತಿಸುವ ನಿಮ್ಮ ಕಾವ್ಯ ಸಿರಿಗೆ ತಲೆದೂಗಿದ್ದೇನೆ. ಮುಂಗಾರು ಯಾವಾಗಲೂ ಆಶಾಭಾವ ಮತ್ತು ಭರವಸೆಗಳ ಸಂಕೇತ, ಆ ಭಾವಗಳನ್ನು ಅಭಿವ್ಯಕ್ತಿಸುವಲ್ಲಿ ಕವಿತೆ ಗೆದ್ದಿದೆ.

    ಪ್ರತ್ಯುತ್ತರಅಳಿಸಿ
  2. ಮೆಚ್ಚಿ ಪ್ರೋತ್ಸಾಹಿಸಿದ ಪ್ರಸಾದ್ ವಿ. ಮೂರ್ತಿಯವರಿಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ