ಮಂಗಳವಾರ, ಮೇ 14, 2013

ಇರುವಿಕೆಯೊಂದೇ ಇರುವುದು -ಇಲ್ಲದಂತೆ.ಪರಮಚೇತನದರಿವು ಪಸರಿಸಿದೆ ಎಲ್ಲೆಲ್ಲು
ಸ್ಥಿರವಾಗಿ ಇರುವುದದು ಇಲ್ಲದಂತೆ.
ಗೊತ್ತಿದ್ದು ಗೊತ್ತಿಲ್ಲದಂತಿರುವ ತತ್ತ್ವವದು,
ಸಚ್ಚಿದಾನಂದವದು; ನಿತ್ಯಪದವು.

ನಶ್ವರದ ಚರದರಿವು ಮನದೊಳಗೆ ಮನೆಮಾಡಿ
ಶಾಶ್ವತವು ನಾನೆಂದು ಬೀಗುತಿಹುದು.
ಗೊತ್ತಿಲ್ಲವೇನಿಲ್ಲ; ಗೊತ್ತೆಂದು ಮೆರೆಯುತಿದೆ
ಪಂಡಿತನ ಪದಭಾಷೆವ್ಯಾಕರಣದಿ.

ಸ್ಥಿರದರಿವು ಚಲಿಸುತಲಿ ಸೃಷ್ಟಿಯಾಗಿದೆ ಜಗವು
ಚಲನಮೂಲವು ಸ್ಥಿರವೆ; ಇರುವುದೊಂದೆ.
ಚಲನವಿಲ್ಲದ ಮನವು ಮೂಲದೊಳು ಸ್ಥಿರವಾಗೆ
ಇದೆಯೊಂದು ಇರುವಿಕೆಯು; ಇಲ್ಲದಂತೆ.ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ