ಮೊದಲ
ಚಲನೆಯ ಮೌನರಿಂಗಣ
ಪ್ರಣವನಾದಕೆ
ಪ್ರೇರಣ.
ನಾದಮಯದಾ
ಅಲೆಯ ಕುಣಿತವೆ
ಪದಗಳುಗಮಕೆ
ವೇದನ.
ಶಬ್ದಶಿಶುಗಳ
ಮೊದಲ ರೋದನ
ಮಧುರಛಂದೋಗಾಯನ.
ಕುಣಿದ
ಛಂದೋಪ್ರಕೃತಿಪದಗಳೆ
ವೇದಜನನಕೆ
ಕಾರಣ.
ವೇದಚರಣದ
ಪಥಸಂಚಲನ
ಅರ್ಥಪುರುಷಾಕರ್ಷಣ.
ಶಬ್ದದುದರದಿ
ರಸದ ಸಿಂಚನ
ಲಲಿತಪದಗಳ
ಪ್ರಜನನ.
ಪದಕೆ
ಅರ್ಥದ ನಿತ್ಯಚುಂಬನ
ಭಾವಗಾನಕೆ
ಸ್ಪಂದನ.
ಪದ್ಯಪ್ರಕೃತಿಯ
ಆತ್ಮದರ್ಶನ
ನಿತ್ಯಮುಕ್ತಿಗೆ
ಸಾಧನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ