ಸೋಮವಾರ, ಮೇ 13, 2013

ಸ್ವರೂಪ ಶೋಧನೆ

ತನ್ನ ಹುಟ್ಟಿನ ಮೂಲ
ಶೋಧಿಸಲು ಹೊರಟಿಹುದು
ಮಂಜುಗಡ್ಡೆಯು ಒಮ್ಮೆ ನೀರಿನತ್ತ.
ಗಡ್ಡೆ ಕರಗಲು ಅಲ್ಲಿ
ನೀರೊಂದೆ ತಾನುಳಿಯೆ
ಶೋಧಕನ ಗುಣಗಣವು ಹೋದದೆತ್ತ?

ತನ್ನ ಅರಿವಿನ ಮೂಲ
ಶೋಧಿಸುವ ಶೋಧಕನು
ತಾನಿಲ್ಲವಾಗುವನು ಅರಿವಿನಲ್ಲಿ.
ಶೋಧನೆಯ ಅಂತ್ಯದಲಿ
ಶೋಧಕನು ಕರಗುವನು
ಲೀನವಾಗುವನವನು ಸತ್ಯದಲ್ಲಿ.

ಪರಮಪ್ರಜ್ಞೆಯ ಕುಡಿಯು
ತನ್ನ ಮೂಲವ ಹುಡುಕಿ
ತಾನೆಂಬ ಮಮಕಾರ ಕಳೆಯುವಂತೆ.
ತನ್ನಾತ್ಮವಿಸ್ತಾರ-
ದರಿವಿನಲಿ ತಾನ್ ಕಳೆದು
ಪರಮಾತ್ಮನವನೊಬ್ಬ ಉಳಿಯುವಂತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ