ಭಾನುವಾರ, ಮೇ 26, 2013

ಇರುವೆ ನೋಡಿ ಕಲಿವೆ



ಇರುವೆ! ನೀನೆ ಗುರುವು ನನಗೆ
ಕಲಿಸು ಶ್ರದ್ಧೆ- ಪಾಠವ.
ಸರದಿಸಾಲಿನಲ್ಲಿ ನಿಂತು
ಕಾಳು ತರುವ ವಿದ್ಯೆಯ

ಗಮನವಿಟ್ಟು ದುಡಿಮೆಮಾಡಿ  
ನೀನು ಅನ್ನ ಗಳಿಸುವೆ.
ನಿನ್ನ ಕಂಡು ನಾನೂ ಕೂಡ
ಪಾಠವನ್ನು ಕಲಿಯುವೆ.

ಕಾಳು ಇರುವ ದಾರಿಯನ್ನು
ನೀನೇ ಕಂಡು ಹಿಡಿಯುವೆ.
ನಿನ್ನ ಹಾಗೆ ಜಾಣನಾಗಿ
ನಾನೂ ಕಾಳು ಗಳಿಸುವೆ.

ನಿನ್ನ ನೋಡಿ ದುಡಿಮೆ ಮಾಡಿ
ನಾನು ಬಾಳ್ವೆ ಮಾಡುವೆ.
ದುಡಿದು ತಿಂದು ದಾನ ಮಾಡಿ
ನಾಳೆಗಾಗಿ ಉಳಿಸುವೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ