ಮಂಗಳವಾರ, ಜೂನ್ 11, 2013

ಮೊಲ್ಲೆ ಹೂವು ಬಂದು ತೂಗಲೆನ್ನ ಕನಸ!ಮಲ್ಲಿಗೆಯ ಹೂವೊಂದು ಕನಸ ತೂಗಲಿ ಬಂದು
ಚೆಲ್ಲುತ್ತ ಪರಿಮಳವ ನನ್ನೆದೆಯಲಿ.
ಕಲ್ಲು ಬಂಡೆಯೇ ತಕ್ಕಡಿಯ ತೂಗುಗಲ್ಲಾದರೂ
ತುಲನೆಯಾಗದ ತೂಕ ಸರಿಹೊಂದಲಿ.

ಇಲ್ಲಸಲ್ಲದ ಭಾರವೆತ್ತಿ ನಿಂತಿರೆ ಮನಸು
ಗೆಲುವು ತನದೇ ಎಂಬ ಭಾವದೂಗಿ.
ಏಳಲಾಗದು ಮೇಲೆ ಕಳಚದಿರೆ ಬೇಡಗಳ
ಕೊಲ್ಲುವುದು ಹೃದಯವನೇ ಚಿಂತೆಯಾಗಿ.
   
ಮೊಲ್ಲೆ ಹೂವಿನ ಗಂಧ ಉಸಿರ ತೀಡಲಿ ಇಂದು
ಕಲ್ಲೆದೆಯು ಭಾರವನು ತಾ ಕಳೆಯಲಿ.
ಮೆಲ್ಲ ಮೆಲ್ಲನೆ ಕನಸು ಹಗುರಾಗಿ ಮೇಲ್ಬರಲಿ
ಸೊಲ್ಲಡರಿ ಸ್ವಾರ್ಥಗಳು ತಾ ಕಳಚಲಿ.
ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ