ಶುಕ್ರವಾರ, ಜೂನ್ 14, 2013

ಉದಯರಾಗಮುಂಜಾವಿನ ಬಾನಂಚಲಿ
ರಂಗೇರಲು ನವರಂಗ.
ರಥವೇರಿದ ರವಿತೇಜಗೆ
ಮಂಜಿನಹನಿ ಬಾಸಿಂಗ.

ಉಲ್ಲಾಸದ ದಿನಹಬ್ಬಕೆ
ಅಣಿಯಾಗಿರೆ ಭೂರಂಗ.
ಸುಮಪಾತ್ರೆಯ ಸವಿಜೇನಿಗೆ
ಹಾತೊರೆದಿದೆ ನವಭೃಂಗ.

ಮಂದಾನಿಲ ಹಿತಸ್ಪರ್ಶಕೆ
ಜಿಗಿದಾಡಿರೆ ಸಾರಂಗ.
ವನಹೊನಲಿನ ಜಲಧಾರೆಗೆ
ತಲೆಬಾಗಿದೆ ಗಿರಿಶೃಂಗ.

ನವಕೋಕಿಲ ಶ್ರುತಿಮಂತ್ರದಿ
ಪೂಜಿಸುತಿರೆ ಶಿವಲಿಂಗ.
ಗಿಳಿಯೋದಿದೆ ದಿನನಿತ್ಯದ
ಶುಭಶಕುನದ ಪಂಚಾಂಗ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ