ಶುಕ್ರವಾರ, ಜೂನ್ 7, 2013

ಕರಿಮೊಗದ ಚೆಲುವೆಯನು ಹೇಗೆ ನಾ ಬಣ್ಣಿಸಲಿ!?



ಕರಿಮೊಗದ ಚೆಲುವೆಯನು ಹೇಗೆ ನಾ ಬಣ್ಣಿಸಲಿ!?
ಪದವಿಲ್ಲ ಯಾವುದೇ ನಿಘಂಟಿನಲಿ.
ಕಣ್ಣು ಮಿಟುಕಿಸಿ ನಕ್ಕು ನಾಚಿ ನೀರಾಗಿಹಳು
ಪದವಿರಿಸಿ ನಿಂದಿಹಳು ಹೊಸಿಲಿನಲ್ಲಿ.

ಖಿನ್ನ ಮನವನು ಕಳೆದು ಹುರುಪು ನೀಡುವ ಬೆಡಗು
ಸಡಗರದಿ ನಿಂದಿರಲು ಸನಿಹದಲ್ಲಿ.
ಪುಳಕಗೊಂಡಿದೆ ತನುವು ಚುರುಕುಗೊಂಡಿದೆ ಮನವು
ಮೂಡಿರಲು ಹೊಸತನವು ಕಣಕಣದಲಿ.

ಎತ್ತುಗಳ ಹೆಗಲಿನಲಿ ನೇಗಿಲನು ಏರಿಸುತ
ಉತ್ತಿರುವೆ ಹೊಲವನ್ನು ನಸುಕಿನಲ್ಲಿ.
ಮುಂಗಾರ ಚಲುವನ್ನು ಮನಸಿನಲೆ ನೆನೆಯುತ್ತ
ಬಿತ್ತಿರುವೆ ಧಾನ್ಯವನು ಮಣ್ಣಿನಲ್ಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ