ಮಂಗಳವಾರ, ಜೂನ್ 18, 2013

ಮರೆವೊಂದೆ ಸಾಧನವು ಮುಕ್ತಿಪದಕೆನನಗೆ ತಿಳಿದಿದೆಯೆಂಬ ಭಾವವನು ಮರೆ ಮನವೆ!
ಮರೆವೊಂದೆ ಸಾಧನವು ಮುಕ್ತಿಪದಕೆ.
ತಿಳಿದಿಲ್ಲವೆಂಬುದದು ಸ್ಪಷ್ಟವಾಗಲು ನಿನಗೆ
ಅರಿವೊಂದೆ ಉಳಿಯುವುದು ನಿತ್ಯಪದಕೆ.

ತಿಳಿದವನು ನಾನೆಂಬ ನೆನಪೊಂದು ನಿನಗೇಕೆ!?
ಮರೆತುಬಿಡು ಎಲೆ ಮನವೆ! ನೆನಪು ಸಲ್ಲ.
ನೆನಪುಗಳ ಹೊರನೂಕಿ ಮರೆವಿನಲಿ ಸ್ಥಿರವಾಗು
ಸ್ಥಿರವೊಂದೆ ಉಳಿಯುವುದು ಮರೆವು ಇಲ್ಲ.

ನಿತ್ಯಮರೆಗುಳಿಯಾಗಿ ಸತ್ಯಪದತುಳಿದಾಗ
ನನ್ನಲ್ಲಿ ನೀನ್ ಕಳೆದು ಉಳಿವುದರಿವು.
ನೀನಿಲ್ಲದಿರಲಲ್ಲಿ ಶೂನ್ಯವೊಂದುಳಿಯುವುದು
ಅದು ನಾನು, ಅದು ನೀನು, ಎಲ್ಲವದುವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ