ಶ್ರದ್ಧೆಯಿಲ್ಲದೆ
ಕಲಿತ
ಸದ್ದು
ಮಾಡುವ ವಿದ್ಯೆ
ಕದ್ದು
ತುಂಬಿದ ಹೊನ್ನ ಕುಡಿಕೆಯಂತೆ.
ನಿದ್ದೆಯಿಂದಲಿ
ಎದ್ದು
ಬುದ್ಧನಾದೆನು
ಎಂದು
ಗದ್ದಲದ
ಸಂತೆಯಲಿ ಸಾರಿದಂತೆ.
ಹೊದ್ದು
ಮಲಗಿದ ಬುದ್ಧಿ
ಬಿದ್ದ
ಕನಸನೆ ಮಾರಿ
ಸಿದ್ಧಖಾದ್ಯವ
ತಾನು ಕೊಂಡಿತಂತೆ.
ಗದ್ದುಗೆಯ
ಏರಿದವ
ಮದ್ಯವನು
ತಾ ಕುಡಿಸಿ
ಬಿದ್ದವಗೆ
ಅನ್ನವನು ಕೊಟ್ಟನಂತೆ.
ಸಿದ್ಧಮಂತ್ರವ
ಪಠಿಸಿ
ವಿದ್ಯೆ
ಕಲಿವೆನು ಎಂದು
ಗುದ್ದಿ
ಗೆಲ್ಲುವುದೆಲ್ಲ ಹಗಲುಗನಸು.
ಸಾಧನೆಯು
ಇಲ್ಲದೆಯೆ
ಸಿದ್ಧಿಸದು
ನಮಗೆಂದೂ
ಮುದ್ದುಮಗುವಿನ
ಶುದ್ಧ ಮುಗ್ಧಮನಸು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ